G. S. K., Swamy,S., PAVITHRA,VishnuvardhanaS. V., Patil,G. K., Halesh,G. J., Suresh,2021-01-232021-01-232018-07UHS16PGM812https://krishikosh.egranth.ac.in/handle/1/5810160519ಪ್ರಸ್ತುತ ಸಂಶೋಧನೆಯನ್ನು ತೋಟಗಾರಿಕೆ ಮಹಾವಿದ್ಯಾಲಯ ಮೈಸೂರಿನ, ಹಣ್ಣು ವಿಜ್ಞಾನ ವಿಭಾಗದಲ್ಲಿ 2017-2018 ನೇ ಸಾಲಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂಶೋಧನೆಯಲ್ಲಿ ಸುರಿನಾಮ್ ಚರ್ರಿ ಹಣ್ಣಿನ ಬೀಜಗಳನ್ನು ಹಣ್ಣಿನಿಂದ ಬೇರ್ಪಡಿಸಿದ ದಿನದಿಂದ 90 ದಿನಗಳವರೆಗೆ 10 ದಿನಗಳ ಅಂತರದಲ್ಲಿ ಬಿತ್ತನೆ ಮಾಡಿ ಬೀಜಗಳ ಮೊಳಕೆಯ ಸಾಧ್ಯತೆಯನ್ನು ನೋಡಲಾಯಿತು. ಬೀಜಗಳನ್ನು ಹಣ್ಣಿನಿಂದ ಬೇರ್ಪಡಿಸಿದ ದಿನದಂದು ಬಿತ್ತನೆ ಮಾಡಿದಾಗ ಅತೀ ಕಡಿಮೆ ದಿನಗಳಲ್ಲಿ (13.67 ದಿನಗಳು) ಮೊಳಕೆಯೊಡೆದಿತ್ತು. ಪೂರ್ತಿಯಾಗಿ ಎಲ್ಲಾ ಬೀಜಗಳು (30.67 ದಿನಗಳು) ಮತ್ತು ಶೇಕಡಾ 50 ರಷ್ಟು (21.00 ದಿನಗಳು) ಮೊಳಕೆಯೊಡೆಯಲು ಅತೀ ಕಡಿಮೆ ದಿನಗಳನ್ನು ತಗೆದುಕೊಂಡಿತ್ತು. ಅಲ್ಲದೇ ಈ ಸಸ್ಯಗಳಲ್ಲಿ ಅತೀ ಹೆಚ್ಚು ಉದ್ದನೆಯ ಬೇರು (8.03 ಸೆಂ. ಮೀ) ಮತ್ತು ಕಾಂಡಗಳು (7.08 ಸೆಂ. ಮೀ) ದಾಖಲಾಗಿತ್ತು. ಅಲ್ಲದೇ ಅಧಿಕ ಪ್ರಮಾಣದಲ್ಲಿ ಮೊಳಕೆಯೊಡೆದು (100.00 %), ಶೇಕಡ 95.83 ರಷ್ಟು ಬದುಕುಳಿಯುವ ಸಾಧ್ಯತೆ ಹೊಂದಿತ್ತು. ಬೀಜೋಪಚಾರದ ಬಗ್ಗೆ ತಪಾಸಣೆ ಮಾಡಲು ಸುರಿನಾಮ್ ಚೆರ್ರಿ ಹಣ್ಣಿನ ಬೀಜಗಳನ್ನು ವಿವಿಧ ರಾಸಾಯನಿಕ ಹಾಗೂ ಸಸ್ಯ ಬೆಳವಣಿಗೆ ಪ್ರಚೋಧÀಕದೊಂದಿಗೆ ಉಪಚರಿಸಲಾಗಿತ್ತು. ರಾತ್ರಿ ಇಡೀ ನೆನೆಸಿಟ್ಟ ಬೀಜಗಳು ಕೇವಲ 18.33 ದಿನಗಳಲ್ಲಿ ಮೊಳಕೆಯೊಡೆಯಲು ಆರಂಭಿಸಿದವು ಹಾಗೂ ಪೂರ್ತಿಯಾಗಿ ಎಲ್ಲಾ ಬೀಜಗಳು (43.00 ದಿನಗಳು) ಮತ್ತು ಶೇಕಡ 50 ರಷ್ಟು (25.00 ದಿನಗಳು) ಮೊಳಕೆಯೊಡೆಯಲು ಅತೀ ಕಡಿಮೆ ದಿನಗಳನ್ನು ತೆಗೆದುಕೊಂಡಿತ್ತು. ಜಿಬ್ಬರಿಲಿಕ್ (500 ಪಿಪಿಎಮ್) ಆಮ್ಲದಲ್ಲಿ ಉಪಚರಿಸಿದ ಬೀಜಗಳು ಅಧಿಕ ಪ್ರಮಾಣದಲ್ಲಿ ಮೊಳಕೆಯೊಡೆದು (100.00 %), ಶೇಕಡ 87.50 ರಷ್ಟು ಬದುಕುಳಿಯುವ ಸಾಧ್ಯತೆ ಕಂಡುಬಂದಿದೆ. ಅಲ್ಲದೇ ಈ ಸಸ್ಯಗಳಲ್ಲಿ ಅತೀ ಹೆಚ್ಚು ಉದ್ದನೆಯ ಬೇರು (8.38 ಸೆಂ. ಮೀ) ಮತ್ತು ಕಾಂಡಗಳು (7.82 ಸೆಂ. ಮೀ) ದಾಖಲಾಗಿತ್ತು. ಮೂರನೆಯ ಪ್ರಯೋಗವನ್ನು ಸುರಿನಾಮ್ ಚೆರ್ರಿಯನ್ನು ಬೇರುಸಸಿಯಾಗಿಟ್ಟುಕೊಂಡು, ನೇರಳೆ, ಸೀಬೆ, ಪನ್ನೇರಳೆ ಮತ್ತು ಸುರಿನಾಮ್ ಚೆರ್ರಿಯನ್ನು ಕಸಿಕಡ್ಡಿಯಾಗಿ ತೆÀಗೆದುಕೊಂಡು ಮಾಡಿದ ಕಸಿ ಗಿಡಗಳಲ್ಲಿ ಸುರಿನಾಮ್ ಚೆರ್ರಿ ಕಸಿಗಳು ಶೇಕಡ 72 ರಷ್ಟು ಸಫಲಗೊಂಡಿವೆ ಹಾಗೂ ಶೇಕq 68 ರಷ್ಟು ಬದುಕುಳಿಯುವ ಸಾಧ್ಯತೆ ಕಂಡುಬಂದಿದೆ.EnglishEXPLORATION OF SURINAM CHERRY (Eugenia uniflora L.) AS A ROOTSTOCK FOR JAMUN, GUAVA AND ROSE APPLEThesis